ತಿರುವನಂತಪುರ, ಜು 31(DaijiworldNews/MS): ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ತನ್ನ ಪೋಷಕರು ಸೇರಿದಂತೆ 24 ಕುಟುಂಬ ಸದಸ್ಯರನ್ನು ಕಳೆದುಕೊಂಡ ಬಾಲಕಿಯೋರ್ವಳು ತನ್ನ 12 ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವುದರ ಮೂಲಕ ಸಾಧನೆ ಮಾಡಿದ್ದಾಳೆ.
೧೭ ರ ವರ್ಷದ 12 ನೇ ತರಗತಿಯ ವಿದ್ಯಾರ್ಥಿನಿ ಗೋಪಿಕಾ, ಕಳೆದ ವರ್ಷ, ಆಗಸ್ಟ್ 6 ರಂದು, ಕೇರಳದ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಲಯಮ್ (ಲೈನ್ ಹೌಸ್) ಗೆ ಅಪ್ಪಳಿಸಿದ ದುರಂತ ಭೂಕುಸಿತದಿಂದ ಗೋಪಿಕಾ ತನ್ನ ಪೋಷಕರು ಸೇರಿದಂತೆ 24 ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಳು. ದುರಂತ ಘಟನೆಯ ಆಘಾತದ ಹೊರತಾಗಿಯೂ, ಗೋಪಿಕಾ ತನ್ನ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ (90+ ಅಂಕಗಳು) ಗೆಲುವು ಸಾಧಿಸಿದ್ದಾಳೆ.
ಆಗಸ್ಟ್ 6, 2020 ರ ಮುಂಜಾನೆ ಮುನ್ನಾರ್ ಸಮೀಪದ ಎರವಿಕುಳಂ ರಾಷ್ಟ್ರೀಯ ಉದ್ಯಾನವನ ಕೆಳಭಾಗದಲ್ಲಿರುವ ಸಣ್ಣ ತೋಟ ಗ್ರಾಮವಾದ ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿದಾಗ, , ಗೋಪಿಕಾ ತನ್ನ ಮನೆಯಲ್ಲಿರಲಿಲ್ಲ ದುರಂತದಲ್ಲಿ ಕೊಚ್ಚಿ ಹೋದ ಮೂರು ಕಾರ್ಮಿಕರ ಮನೆಗಳಲ್ಲಿಗೋಪಿಕಾ ಮನೆಯೂ ಒಂದಾಗಿತ್ತು. ಘಟನೆ ನಡೆದ ತಿರುವನಂತಪುರಂ ಜಿಲ್ಲೆಯ ತನ್ನ ಸಂಬಂಧಿಕರ ಮನೆಯಲ್ಲಿದ್ದಳು. ಗೋಪಿಕಾ ಅಲ್ಲಿಂದ ಆಕೆಯ ಸಹೋದರಿಯೊಂದಿಗೆ ಜಿಲ್ಲೆಯ ಸರ್ಕಾರಿ ಮಾದರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಪ್ಲಸ್ ಒನ್ ತರಗತಿಗಳಿಗೆ ಹಾಜರಾಗಿದ್ದಳು. . ದುರಂತದಲ್ಲಿ ಆಕೆಯ ತಾಯಿ, ತಂದೆ,ಜ್ಜ- ಅಜ್ಜಿ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು ಮತ್ತು ಸೋದರಸಂಬಂಧಿಗಳನ್ನು ಕಳೆದುಕೊಂಡಿದ್ದಾಳೆ .ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಒಟ್ಟು 71 ಜನರು ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ವೈದ್ಯೆಯಾಗಲು ಬಯಸುತ್ತಿರುವ ಗೋಪಿಕಾ ಸದ್ಯ NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಗೆ ತಯಾರಿ ನಡೆಸುತ್ತಿದ್ದು, " ನಾನು ಆಘಾತದಿಂದ ಇನ್ನು ಹೊರಬಂದಿಲ್ಲ, ವೈದ್ಯೆಯಾಗುವ ಆಸೆ ಇದ್ದು ಪೋಷಕರು ನನ್ನನ್ನು ಎಲ್ಲಿಂದಲಾದರೂ ಸಂತೋಷದಿಂದ ನೋಡುತ್ತಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಭರವಸೆಯ ಮಾತುಗಳನ್ನಾಡುತ್ತಾಳೆ.