ಬೆಂಗಳೂರು, ಜು.31 (DaijiworkldNews/HR): ಮುಂದಿನ ಚುವಾಣೆಯನ್ನು ನಳಿನ್ ಕುಮಾರ್ ನೇತೃತ್ವದಲ್ಲಿ ಸಂಘಟನೆಯ ಶಕ್ತಿಯಿಂದಲೇ ಎದುರಿಸಿ ಪೂರ್ಣ ಬಹುಮತ ಪಡೆಯಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಮುನ್ನಡೆಸಿದರೆ, ನಳಿನ್ ಕುಮಾರ್ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿರಿಯರನ್ನು ಸಚಿವ ಸಂಪುಟದಿಂದ ಕೈಬಿಡುವ ಬಗ್ಗೆ ಕೇಂದ್ರದ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಚುನಾವಣೆಯು ಎರಡು ವರ್ಷದ ಬಳಿಕ ಬರಲಿದ್ದು, ಅದಕ್ಕೆ ಪಕ್ಷ ಸಂಘಟನೆ ಮಾಡಿ ಚುನಾವಣೆಯಲ್ಲಿ ಪೂರ್ಣ ಬಹುಮತ ಬರಬೇಕಿದೆ" ಎಂದರು.
"ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರರು. ಆದರೆ ದುರಾದೃಷ್ಟವೆಂದರೆ ಜನರು ಆಡಳಿತ ಮಾಡಿ ಎಂದು ಅಧಿಕಾರ ಕೊಡುತ್ತಾರೆ ಅದರೆ ಪೂರ್ಣ ಬಹುಮತವಿಲ್ಲ. ಹೀಗಾಗಿ ಒಂದಲ್ಲ ಒಂದು ಗೊಂದಲವಾಗುತ್ತಿದೆ. ನಾಲ್ಕು ಬಾರಿಯೂ ಹೀಗೆ ಆಗಿದೆ" ಎಂದಿದ್ದಾರೆ.
ಇನ್ನು ಮುಂದಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಗಟ್ಟಿ ಮಾಡಲಿದ್ದು, ಸರ್ಕಾರ ಮತ್ತು ಸಂಘಟನೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ" ಎಂದು ಹೇಳಿದ್ದಾರೆ.