ಗುಜರಾತ್, ಜು 30 (DaijiworldNews/MS): ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ 17 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಮೆಹ್ಸಾನಾದ ಬೆಚರಾಜಿ ತಾಲೂಕಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಶ್ರದ್ಧಾ ದೇಸಾಯಿ ಎಂದು ಗುರುತಿಸಲಾಗಿದೆ. ಶ್ರದ್ಧಾ ತನ್ನ ಸ್ಮಾರ್ಟ್ ಪೋನ್ ನ್ನು ಚಾರ್ಜಿಂಗ್ ನಲ್ಲಿ ಇರಿಸಿ ಮಾತನಾಡುತ್ತಿದ್ದಾಗ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಹನ್ನೆರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ದೇಸಾಯಿ ತನ್ನ ಸಂಬಂಧಿಕರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಳು . ಈ ವೇಳೆ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿರಬಹುದು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆ ವೇಳೆ ಶೃದ್ದಾ ತನ್ನ ಮನೆಯ ಮೇಲಿನ ಮಹಡಿಯಲ್ಲಿದ್ದು, ಸ್ಫೋಟದಿಂದಾಗಿ ಕೋಣೆಯ ಬಾಗಿಲು ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲದೆ ಕೋಣೆಯಲ್ಲಿ ಸಂಗ್ರಹವಾಗಿರುವ ಒಣಗಿದ ಹುಲ್ಲು ಕೂಡ ಬೆಂಕಿ ತಗುಲಿ ತೀವ್ರವಾದ ಸುಟ್ಟ ಗಾಯಗಳಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
"ಮೊಬೈಲ್ ಬ್ಯಾಟರಿ ಮುಗಿಯುತ್ತಿದ್ದಂತೆ ಚಾರ್ಜಿಂಗ್ ಗಾಗಿ ಅದನ್ನು ಪ್ಲಗ್ ಇನ್ ಮಾಡಿದಳು. ಅದೇ ಸಮಯದಲ್ಲಿ ಅವಳು ಫೋನಲ್ಲಿ ಮಾತನಾಡುವುದನ್ನು ಮುಂದುವರಿಸಿದಳು .ಈ ವೇಳೆ ಅದು ಸ್ಫೋಟಗೊಂಡಿತು ಏನಾಯಿತು ಎಂದು ನಮಗೆ ತಿಳಿಯುವ ಮೊದಲೇ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಳು ”ಎಂದು ಆಕೆಯ ತಂದೆ ಶಂಭು ಘಟನೆಯ ಬಗ್ಗೆ ವಿವರಿಸಿದ್ದಾರೆ.