ಬೆಂಗಳೂರು, ಜು.30 (DaijiworldNews/HR): ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಹೈಕಮಾಂಡ್ ಸರ್ಕಾರ. ದೆಹಲಿಯಲ್ಲಿರುವುದು ಒಂದು ಹೈಕಮಾಂಡ್ ಆದರೆ, ದವಳಗಿರಿಯಲ್ಲಿರುವುದು ಮತ್ತೊಂದು ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಿಎಂ ಹೆಸರನ್ನ ಸೂಚಿಸುವುದಿಲ್ಲ ಎನ್ನುತ್ತಲೇ ದೆಹಲಿ ಹೈಕಮಾಂಡ್ನ್ನ ಬಿ.ಎಸ್ ಯಡಿಯೂರಪ್ಪ ಅವರು ಮಣಿಸಿ ತಮಗೆ ಬೇಕಾದ ಸಂಪುಟ ರಚಿಸಿದ್ದು, ಒಟ್ಟಿನಲ್ಲಿ ಬಿಜೆಪಿಯ ಕಿತ್ತಾಟ ನಿಲ್ಲದು, ಸ್ಥಿರ ಸರ್ಕಾರ ಸಿಗದು" ಎಂದಿದೆ.
ಇನ್ನು "ದೆಹಲಿಯಲ್ಲಿರುವ ಪಕ್ಷನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಕೊಚ್ಚಿಕೊಳ್ಳುತ್ತಿದ್ದರು, ಆದರೆ ಸಿಎಂ ಆಗಿದ್ದು ಬಿಎಸ್ವೈ ನಿಷ್ಠ ಬಸವರಾಜ್ ಬೊಮ್ಮಾಯಿ.ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್! ಈ ಹೊತ್ತಿನಲ್ಲಿ ಬಿಜೆಪಿಯ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ.್" ಎಂದು ಹೇಳಿದೆ.