ತೆಲಂಗಾಣ, ಜು 30 (DaijiworldNews/PY): ಸ್ಥಳೀಯ ಕಾಂಗ್ರೆಸ್ ಮುಖಂಡರೋರ್ವರು ಟಿಆರ್ಎಸ್ ಪಕ್ಷದ ಸ್ನೇಹಿತನ ವಿವಾಹಕ್ಕೆ 5 ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ಮೊಹಸಿನ್ ಎನ್ನುವವರು ತಮ್ಮ ಸ್ನೇಹಿತ ಸಯ್ಯದ್ ರಯಾದ್ ಎಂಬವರ ವಿವಾಹದ ಸಂದರ್ಭ 5 ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಹಿರ್ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ರಯದ್ ಅವರ ವಿವಾಹ ಕಾರ್ಯಕ್ರಮ ನಡೆದಿತ್ತು. ಈ ವೇಳೆ ವೇದಿಕೆಯಲ್ಲಿ ಮೊಹಸಿನ್ ಅವರು ರಯದ್ ಅವರಿಗೆ ಪೆಟ್ರೋಲ್ ಅನ್ನು ಬಹುಮಾನವಾಗಿ ನೀಡಿದ್ದಾರೆ.
ವೇದಿಕೆಯಲ್ಲಿ ಗಿಫ್ಟ್ ತೆರೆಯುವ ದೃಶ್ಯ ವೈರಲ್ ಆಗಿದೆ. "ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸುವ ವಿಧಾನ ಅದು. ಪೆಟ್ರೋಲ್ ಬೆಲೆ ಇಳಿಸಬೇಕು" ಎಂದು ಮೊಹಾಸಿನ್ ತಿಳಿಸಿದ್ದಾರೆ.