ಮಂಡ್ಯ, ಜು 30 (DaijiworldNews/PY): "ನಟ ಅಭಿಷೇಕ್ ಅಂಬರೀಷ್ ಅವರು ಮುಂದಿನ ವಿಧಾನಸಭಾ ಚುನಾವಣೆಯ ಸ್ಪರ್ಧೆ ಮಾಡುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದು, ಜನ ಬಯಸಿದ್ದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ" ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನಹಳ್ಳಿ ಗ್ರಾಮದಲ್ಲಿ ಅಂಬರೀಶ್ ಅಭಿಮಾನಿಗಳು ವಿತರಿಸುತ್ತಿದ್ದ ಫುಡ್ಕಿಟ್ ಕಾರ್ಯಕ್ರಮಕ್ಕೆ ಬಂದ ಸಂದರ್ಭ ಮಾತನಾಡಿದ ಅವರು, "ಜನ ಬಯಸಿದರೆ ಖಂಡಿಯವಾಗಿಯೂ ನಾನು ರಾಜಕೀಯಕ್ಕೆ ಬರುತ್ತೇನೆ. ಭವಿಷ್ಯದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು. ಮದ್ದೂರು ಅಥವಾ ಮಂಡ್ಯಕ್ಕಾಗಲಿ ಜಿಲ್ಲೆಯಲ್ಲಿರುವ ಏಳು ಕ್ಷೇತ್ರಗಳಿಗೂ ಕೂಡಾ ಉತ್ತಮ ಎಂಎಲ್ಎಗಳು ಸಿಗಬೇಕು. ಅಲ್ಲದೇ, ಒಳ್ಳೆಯ ಪ್ರತಿನಿಧಿಗಳು ಕೂಡಾ ಸಿಗಬೇಕು. ನನಗೆ ಯಾರ ಮನೆಯವರು ಬೇಕಾದವರು ಅಂತಲ್ಲ" ಎಂದು ಹೇಳಿದ್ದಾರೆ.
"ಸಿಎಂ ಬದಲಾವಣೆ ಆಗುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಯಾರಿಗಾದರೂ ಗೊತ್ತಿತ್ತಾ?. ಎಂದು ಅಭಿಷೇಕ್ ಕೇಳಿದ್ದು, ಈ ಸಂದರ್ಭ ಅಭಿಮಾನಿಯೋರ್ವರು, ಸಿಎಂ ಬದಲಾವಣೆ ಆಗುತ್ತೆ ಎಂದು ತಿಳಿದಿತ್ತು. ಆದರೆ, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗುತ್ತಾರೆ" ಎಂದು ತಿಳಿದಿರಲಿಲ್ಲ ಎಂದಿದ್ದಾರೆ.
"ಭವಿಷ್ಯದಲ್ಲಿ ಏನು ಬೇಕಾದರು ಆಗಬಹುದು. ಜನ ಬಯಸಿದ್ದಲ್ಲಿ ಖಂಡಿತವಾಗಿಯೂ ನಾನು ರಾಜಕೀಯಕ್ಕೆ ಬರುತ್ತೇನೆ" ಎಂದು ರಾಜಕೀಯಕ್ಕೆ ಪ್ರವೇಶ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ.