ಜಮ್ಮು, ಜು.30 (DaijiworldNews/HR): ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಜಮ್ಮು ಕಾಶ್ಮೀರದ ದೇವಾಲಯಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದು, ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 5 ರಂದು ಜಮ್ಮುವಿನ ದೇವಾಲಯಗಳನ್ನು ಗುರಿಯಾಗಿರಿಸಲು ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸಲು ಪ್ರಯತ್ನಿಸಬಹುದು ಎಂದು ತಿಳಿದುಬಂದಿದೆ,
ಇನ್ನು ಇತ್ತೀಚೆಗೆ ಐಇಡಿಗಳನ್ನು ಡ್ರೋನ್ ಗಳಿಂದ ಬೀಳಿಸಿದ ಮೂರು ಘಟನೆಗಳು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ಜಮ್ಮುವಿನ ದೇವಾಲಯಗಳ ಬಳಿಯ ಜನನಿಬಿಡ ಸ್ಥಳಗಳಲ್ಲಿ ಸ್ಫೋಟಕಗಳನ್ನು ನೆಡಲು ನೋಡುತ್ತಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯ ಭಯೋತ್ಪಾದನಾ ಸಂಚಿನ ಹಿಂದಿನ ಮೂರು ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ನಾರ್ತ್ ಬ್ಲಾಕ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.