ಪಾಲಕ್ಕಾಡ್, ಜು 30 (DaijiworldNews/PY): ಕೋಳಿ ಆಹಾರ ತಯಾರಿಕಾ ಘಟಕದಲ್ಲಿ ತೈಲ ಸೋರಿಕೆಯಾದ ಪರಿಣಾಮ ಸಂಭವಿಸಿದ ಸ್ಪೋಟದಲ್ಲಿ 20 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
"ಜುಲೈ 29ರ ಗುರುವಾರ ಪಾಲಕ್ಕಾಡ್ನ ತಿರುವಿಳಕುನ್ನು ಎಂಬಲ್ಲಿ ಸಂಜೆ 5 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಸ್ಪೋಟದ ವೇಳೆ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಪ್ರಾಯೋಗಿಕವಾಗಿ ಘಟಕವು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ತೈಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ತಕ್ಷಣವೇ ಅಗ್ನಿಶಾಮಕ ದಳದ ಸಹಾಯ ಕೋರಿದ್ದು, ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸುತ್ತಿರುವ ಮಧ್ಯೆ ತೈಲ ಟ್ಯಾಂಕ್ನಲ್ಲಿ ಬಿಸಿ ಹೆಚ್ಚಳವಾಗಿ ಸ್ಪೋಟ ಸಂಭವಿಸಿದೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.