ಶ್ರೀನಗರ, ಜು 30 (DaijiworldNews/PY): "ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಮೂರು ಡ್ರೋನ್ಗಳು ಪತ್ತೆಯಾಗಿವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂಬಾದ ಅಂತರಾಷ್ಟ್ರೀಯ ಗಡಿ ಪ್ರದೇಶ, ಐಟಿಬಿಪಿ ಕ್ಯಾಂಪ್, ಸಾಂಬಾದ ಆರ್ಮಿ ಕ್ಯಾಂಪ್ ಬಳಿ ಡ್ರೋನ್ ಪತ್ತೆಯಾಗಿದ್ದು, ಈ ಹಿನ್ನೆಲೆ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದಾರೆ.
"ಚಿಲ್ಯಾದ ಹಾಗೂ ಗಗ್ವಾಲ್ ಪ್ರದೇಶಗಳಲ್ಲಿ ಗುರುವಾರ ರಾತ್ರಿ 8.30ರ ಸುಮಾರಿಗೆ ಏಕಕಾಲದಲ್ಲಿ ಡ್ರೋನ್ ಕಾಣಿಸಿಕೊಂಡಿದೆ. ಚಿಲ್ಯಾದ ಪ್ರದೇಶದಲ್ಲಿ ಕಾಣಿಸಿಕೊಂಡ ಡ್ರೋನ್ ಅನ್ನು ಗುರಿಯಾಗಿಸಿಕೊಂಡು ಗಡಿಭದ್ರತಾ ಪಡೆ ಸಿಬ್ಬಂದಿಗಳು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಡ್ರೋನ್ ತಪ್ಪಿಸಿಕೊಂಡು ಪಾಕಿಸ್ತಾನದತ್ತ ತೆರಳಿದ. ಉಳಿದ ಎರಡು ಡ್ರೋನ್ಗಳು ಕೆಲವು ಕ್ಷಣದಲ್ಲಿ ಕಣ್ಮರೆಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಸ್ಥಳಗಳಲ್ಲಿ ಡ್ರೋನ್ ಪತ್ತೆಯಾದ ಕಾರಣ ಸಾಂಬಾ ಜಿಲ್ಲೆಯಲ್ಲಿ ಅಧಿಕಾರಿಗಳು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.