ಬೆಂಗಳೂರು, ಜು.29 (DaijiworldNews/HR): ಸಂಪುಟ ವಿಸ್ತರಣೆಯ ಬಗ್ಗೆ ಕೇಂದ್ರ ನಾಯಕರೊಂದಿಗಿನ ಮೊದಲ ಭೇಟಿಯ ವೇಳೆ ಚರ್ಚಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೇಂದ್ರ ನಾಯಕರ ಭೇಟಿಗೆ ಸಮಯ ಕೇಳಿದ್ದು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈಗಾಗಲೇ ನನಗೆ ಶುಭ ಹಾರೈಸಿದ್ದಾರೆ. ದೆಹಲಿಯ ಉನ್ನತ ನಾಯಕರಿಗೆ ಅಭಿನಂದನೆ ತಿಳಿಸಲು ಅವರನ್ನು ನಾಳೆ ಭೇಟಿ ಮಾಡುತ್ತಿದ್ದೇನೆ. ಆದರೆ ಈ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ ಎಂದರು.
ಇನ್ನು ಸಂಪುಟ ರಚನೆ ವೇಳೆ ಒತ್ತಡ ಸಾಮಾನ್ಯವಾಗಿದ್ದು, ಪಕ್ಷ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಬಸವರಾಜ್ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಮಾಡುವ ಮೊದಲು ಹೈಕಮಾಂಡ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿಯು ತಿಳಿಸಿದೆ.