ನವದೆಹಲಿ, ಜು.29 (DaijiworldNews/HR): ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ 5 ಜಿ ವೈರ್ಲೆಸ್ ತಂತ್ರಜ್ಞಾನದ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಅರ್ಜಿಯನ್ನು ವಾಪಸ್ ಪಡೆಯಲು ನ್ಯಾಯಮೂರ್ತಿ ಜಯಂತ್ ನಾಥ್ ಅವಕಾಶ ಕಲ್ಪಿಸಿದ್ದರು ಎನ್ನಲಾಗಿದ್ದು, 5ಜಿ ವೈರ್ಲೈಸ್ ತಂತ್ರಜ್ಞಾನದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು 'ವಜಾಗೊಳಿಸಲಾಗಿದೆ' ಎನ್ನುವ ಬದಲು ‘ತಿರಸ್ಕರಿಸಲಾಗಿದೆ’ ಎಂದು ಘೋಷಿಸುವಂತೆ ಕೋರಿ ಚಾವ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇನ್ನು ದೇಶದಲ್ಲಿ 5 ಜಿ ವೈರ್ಲೆಸ್ ನೆಟ್ವರ್ಕ್ಗಳನ್ನು ಸ್ಥಾಪಿಸುವುದರ ವಿರುದ್ಧ ಜೂನ್ ತಿಂಗಳಲ್ಲಿ ಚಾವ್ಲಾ ಮತ್ತು ಇತರ ಇಬ್ಬರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.