ಮೈಸೂರು, ಜು 29 (DaijiworldNews/PY): ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿಯ 2ನೇ ವರ್ಷದ ರಜತ ಮಹೋತ್ಸವದ ಹಾಗೂ ಪದಗ್ರಹಣದ ಸವಿನೆನೆಪಿಗಾಗಿ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಒಂದು ವರ್ಷದ ಅವಧಿಗೆ ಸಿಂಹವನ್ನು ದತ್ತು ತೆಗೆದುಕೊಳ್ಳಲಾಯಿತು.
ಸಿಂಹವನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ 317ಎ ಅಂತರರಾಷ್ಟ್ರೀಯ ಕ್ಲಬ್ನ ರಾಜ್ಯಪಾಲ ಲಯನ್ ಡಾಕ್ಟರ್, ಪ್ರಭಾ ಮೂರ್ತಿ, ಪಿ.ಎಂ.ಜಿ.ಎಫ್. ಜಿಲ್ಲಾ ಕಾರ್ಯಾಧ್ಯಕ್ಷ ಲಯನ್ ಸುಂದರ ಮೂರ್ತಿ, ಜಿಲ್ಲಾ ಖಜಾಂಚಿ ಲಯನ್ ಶ್ರೀನಿವಾಸ್ ಮೂರ್ತಿ, ಮೈಸೂರು ಪ್ಯಾಲೇಸ್ ಸಿಟಿ ಕ್ಲಬ್ನ ಅಧ್ಯಕ್ಷ ಲಯನ್ ಜಿ. ಶಿವಕುಮಾರ್, ಕಾರ್ಯದರ್ಶಿ ಲಯನ್ ಚಿ.ನಾ.ರಾಜೇಂದ್ರ, ಖಜಾಂಚಿ ಮೆಲ್ವಿನ್ ಮತ್ತು ಇತರೆ ಕ್ಲಬ್ನ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
"ಕಳೆದ ಬಾರಿಯೂ ಒಂದು ವರ್ಷದ ಅವಧಿಗೆ ಸಿಂಹವನ್ನು ದತ್ತು ತೆಗೆದುಕೊಂಡಿದ್ದರು" ಎಂದು ಕಾರ್ಯದರ್ಶಿ ಲಯನ್ ಚಿ ನಾ ರಾಜೇಂದ್ರ ತಿಳಿಸಿದರು.