ನವದೆಹಲಿ, ಜು.29 (DaijiworldNews/HR): ಟ್ವಿಟ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈಗ 7 ಕೋಟಿಗೂ (70 ದಶಲಕ್ಷ) ಅಧಿಕ ಫಾಲೋವರ್ಗಳನ್ನು ಹೊಂದಿದ್ದು, ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅವರು ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ರಾಜಕಾರಣಿಯಾಗಿದ್ದಾರೆ.
2009ರಲ್ಲಿ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ಟ್ವಿಟರ್ ಪ್ರವೇಶಿಸಿದ್ದು, ಒಂದು ವರ್ಷದಲ್ಲಿ ಅವರು ಒಂದು ಲಕ್ಷ ಫಾಲೋವರ್ಗಳನ್ನು ಗಳಿಸಿ. ಜುಲೈ 2020ರಲ್ಲಿ ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯನ್ನು 6 ಕೋಟಿ ಮಂದಿ ಫಾಲೋ ಮಾಡಿದ್ದರು. 2020ರ ಜುಲೈನಿಂದ 2021ರ ಜುಲೈ ನಡುವಿನ ಈ ಒಂದು ವರ್ಷದ ಅವಧಿಯಲ್ಲಿ ಅವರು ಒಂದು ಕೋಟಿ ಫಾಲೋವರ್ಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟ್ವಿಟರ್ನಲ್ಲಿ 8.3 ಕೋಟಿ ಹಿಂಬಾಲಕರಿದ್ದಾರೆ. ಆದರೆ ಅವರ ಖಾತೆ ಈಗ ನಿಷ್ಕ್ರಿಯವಾಗಿದೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಟ್ವಿಟರ್ನಲ್ಲಿ 2.63 ಕೋಟಿ ಫಾಲೋವರ್ಗಳನ್ನು ಹೊಂದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 1.94 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.