ಬೆಂಗಳೂರು, ಜು.29 (DaijiworldNews/HR): ಕರ್ನಾಟಕದಲ್ಲಿ ಬಸವರಾಜ್ ಬೊಮ್ಮಾಯಿ ಮಾತ್ರವಲ್ಲ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ಅವರ ಸಂಪುಟದಲ್ಲಿ ನಾನು ಸಚಿವನಾಗಿ ಮುಂದುವರೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗೆ ಬದ್ಧನಾಗಿದ್ದು, ನಾನು ಈ ಬಾರಿ ಸರ್ಕಾರದಲ್ಲಿ ಸಚಿವನಾಗುವುದಿಲ್ಲ. ನಾನು ಸ್ಪೀಕರ್, ರಾಜ್ಯಾಧ್ಯಕ್ಷ, ಸಿಎಂ, ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ನನಗೆ ಎಲ್ಲಾ ರೀತಿಯ ಸ್ಥಾನವನ್ನೂ ನೀಡಿದ್ದು, ನಾನು ಪಕ್ಷದಲ್ಲಿ ಹಿರಿಯ ನಾಯಕ. ಮುಜುಗರವಾಗುವುದು ಬೇಡ ಎಂಬ ಕಾರಣಕ್ಕೆ ನಾನೇ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದರು.
"ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರಿಂದ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಇಂದು ಬೊಮ್ಮಾಯಿ ಇರಲಿ ಅಥವಾ ಬೇರೆ ಯಾರೇ ಸಿಎಂ ಆಗಿದ್ದರೂ ನಾನು ಮಂತ್ರಿಯಾಗಿ ಮುಂದುವರೆಯುತ್ತಿರಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು "ಪಕ್ಷದ ಕಾರ್ಯಕರ್ತನಾಗಿ, ಶಾಸಕನಾಗಿ ಕೆಲಸ ಮಾಡಲು ನಾನು ಇಚ್ಛಿಸುತ್ತೇನೆ. ಇದು ನನ್ನ ಸ್ವಾಭಿಮಾನ ಹಾಗೂ ಗೌರವದ ನಿರ್ಧಾರವಾಗಿದೆ. ನನಗೆ ಬೇರೆ ಯಾವುದೇ ಸ್ಥಾನದ ಆಕಾಂಕ್ಷೆಯೂ ಇಲ್ಲ" ಎಂದು ಹೇಳಿದ್ದಾರೆ.