ಭೋಪಾಲ್, ಜು.29 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವಚಿತ್ರವನ್ನು ಮಧ್ಯಪ್ರದೇಶದಲ್ಲಿ ಪಡಿತರ ಅಕ್ಕಿ ಚೀಲಕ್ಕೆ ಮುದ್ರಿಸಿ ಆಗಸ್ಟ್ ತಿಂಗಳಿನಿಂದ ವಿತರಿಸಲು ಮುಂದಾಗಿದ್ದು, ಇದು 'ವೈಯಕ್ತಿಕ ಪ್ರಚಾರ' ಎಂದು ಕಾಂಗ್ರೆಸ್ ಟೀಕಿಸಿದೆ.
ಸಾಂಧರ್ಭಿಕ ಚಿತ್ರ
ಆಗಸ್ಟ್ 7ಕ್ಕೆ ಮಧ್ಯಪ್ರದೇಶ ಸರ್ಕಾರ 'ಅನ್ನ ಉತ್ಸವ' ಹಮ್ಮಿಕೊಂಡಿದ್ದು, ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ನೈಜ ಫಲಾನುಭವಿಗಳ ಹೆಸರಲ್ಲಿ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಮಧ್ಯಪ್ರದೇಶಲ್ಲಿ ಇರುವ ಪ್ರತಿ 25,435 ಸಾರ್ವಜನಿಕ ವಿತರಣ ಅಂಗಡಿಗಳಿಂದ ನೂರು ನೂರು ಮಂದಿ ಫಲಾನುಭವಿಗಳಿಗೆ ಅನ್ನ ಉತ್ಸವದ ಭಾಗವಾಗಿ ಪಡಿತರ ಅಕ್ಕಿ ಚೀಲ ವಿತರಿಸಲಾಗುತ್ತಿದೆ.
ಇನ್ನು ಛತ್ತೀಸಗಡದಲ್ಲೂ ಇದೇ ಮಾದರಿಯಲ್ಲಿ ಅನ್ನ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಡಿತರ ಅಕ್ಕಿ ಚೀಲದ ಮೇಲೆ ಅಲ್ಲಿನ ಸಿಎಂ ಭೂಪೇಶ್ ಬಾಘೇಲ್ ಮತ್ತು ಪ್ರಧಾನಿ ಚಿತ್ರವಿರಲಿದೆ ಎಂದು ಬಿಸಾಹುಲಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.