ಮುಂಬೈ, ಜು.29 (DaijiworldNews/HR): ಪೋರ್ನ್ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾ ಅವರಿಗೆ ಜಾಮೀನು ನಿರಾಕರಿಸಿದ್ದು, ಈ ನಡುವೆ ಕೆಲವು ನಟಿಯರು ರಾಜ್ ಕುಂದ್ರಾ ಅವರ ಆಪ್ ಹಾಟ್ ಶಾಟ್ ವಿರುದ್ಧ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು ಇದೀಗ ಶೆರ್ಲಿನ್ ಚೋಪ್ರಾ ಅವರು ಲೈಂಗಿಕ ದುರುಪಯೋಗದ ಆರೋಪ ಮಾಡಿದ್ದಾರೆ.
ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ನಟಿ ಮುಂಬೈ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದು, ಆಕೆ 2021 ರ ಏಪ್ರಿಲ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ರಾಜ್ ವಿರುದ್ಧ ಆಕೆ ಎಫ್ಐಆರ್ ನೀಡಿದ್ದಾರೆ.
ಇನ್ನು ಮಾರ್ಚ್ 27, 2019 ರಂದು ನಡೆದ ವ್ಯವಹಾರ ಸಭೆಯ ನಂತರ, ತೀವ್ರವಾದ ವಾದದಿಂದಾಗಿ ರಾಜ್ ತನ್ನ ಮನೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಶೆರ್ಲಿನ್ ಆರೋಪಿದ್ದಾರೆ.
ನಾನು ವಿವಾಹಿತ ಪುರುಷನೊಂದಿಗೆ ತೊಡಗಿಸಿಕೊಳ್ಳಲು ಅಥವಾ ವ್ಯವಹಾರವನ್ನು ಸಂತೋಷದಿಂದ ಮಾಡಲು ಎಂದಿಗೂ ಬಯಸುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.