ಮೈಸೂರು, ಜು 29 (DaijiworldNews/PY): "ಕೆಲ ಮಕ್ಕಳಿಗೆ ತಂದೆಯ ಗುಣ ಬರುವುದಿಲ್ಲ. ಹಾಗೆಯೇ, ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಗುಣಗಳು ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಸಿಎಂ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಸೂಚಿಸಿದ್ದಾರೆ. ಅವರು ಸರ್ಕಾರದ ಮೇಲೂ ಸಹಜವಾದ ಹಿಡಿತಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ನೂತನ ಸಿಎಂ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವಾಗುತ್ತದೆಯೇ?. ಬಿಜೆಪಿ ಸಿದ್ಧಾಂತಗಳು ಹಾಗೂ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಆಗುತ್ತದೆಯೇ?" ಎಂದು ಕೇಳಿದ್ದಾರೆ.
"ಅವರ ಮೇಲೆ ಈಗಲೇ ಸುಮ್ಮನೆ ದೂರುವುದಿಲ್ಲ. ಅವರು ಉತ್ತಮ ಕೆಲಸ ಮಾಡಲಿ ಎಂದು ಆಶಿಸುತ್ತೇನೆ" ಎಂದಿದ್ದಾರೆ.
ಸೂಪರ್ ಸಿಎಂ ಆರೋಪದಿಂದ ಮುಕ್ತಾನಾಗಿದ್ದೇನೆ ಎಂಬ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಹಾಗಾದರೆ ಸೂಪರ್ ಸಿಎಂ ಆಗಿದ್ದರು ಎನ್ನುವುದು ಅವರ ಮಾತಿನ ಅರ್ಥವೇ?. ಮಾತನ್ನು ಒಪ್ಪಿಕೊಂಡತೆ ಅಲ್ಲವೇ?" ಎಂದು ಕೇಳಿದ್ದಾರೆ.