ನವದೆಹಲಿ, ಜು 29 (DaijiworldNews/MS): ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ. ಈ ಮಸೂದೆ ಮಕ್ಕಳ ದತ್ತು ಸ್ವೀಕಾರ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟೇಟ್ ಗಳಿಗೆ ಹೆಚ್ಚಿನ ಅಧಿಕಾರ ನೀಡಲಿದೆ. 2021 ಮಾರ್ಚ್ ನಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ದುರ್ಬಲ ಮಕ್ಕಳ ಆರೈಕೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸುವ ಅಗತ್ಯತೆಯ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಜುಬಿನ್ ಇರಾನಿ ಒತ್ತಿ ಹೇಳಿದರು. ಇವೆಲ್ಲವುಗಳಿಂಗಿಂತಲೂ ಹೆಚ್ಚಾಗಿ ಭಾರತದ ಮಕ್ಕಳಿಗೆ ಆದ್ಯತೆ ನೀಡುವಲ್ಲಿ ಸಂಸತ್ತಿನ ಬದ್ಧತೆಯನ್ನು ಅವರು ವಿವರಿಸಿದರು.
ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಯ ಹೊಣೆಗಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಜೆಜೆ ಕಾಯ್ದೆಯ ಸೆಕ್ಷನ್ 61 ರ ಅಡಿಯಲ್ಲಿ ದತ್ತು ಆದೇಶಗಳನ್ನು ಹೊರಡಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವುದು ಈ ತಿದ್ದುಪಡಿಗಳಲ್ಲಿ ಸೇರಿದೆ. ಈ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ಈ ಕಾಯಿದೆಯಡಿ ಮತ್ತಷ್ಟು ಅಧಿಕಾರ ನೀಡಲಾಗಿದೆ