ಬೆಂಗಳೂರು, ಜು. 28 (DaijiworldNews/SM): ತಿಂಗಳುಗಳ ಹಿಂದೆ ಕೋವಿಡ್-19 ಲಸಿಕೆ ಗರ್ಭಿಣಿಯರು ಪಡೆಯಬಹುದೆಂದು ಆರೋಗ್ಯ ಇಲಾಖೆ ಹೇಳಿತ್ತು. ಇದೀಗ ಗರ್ಭಿಣಿಯರಿಗೆ ಎಷ್ಟು ಸುರಕ್ಷಿತ ಎನ್ನುವುದನ್ನು ಕೂಡ ಇಲಾಖೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಇಲಾಖೆಮ್ ಗರ್ಭಿಣಿಯರು ಹಾಗೂ ಹೊಟ್ಟೆಯಲ್ಲಿರುವ ಭ್ರೂಣ ಇಬ್ಬರಿಗೂ ಲಸಿಕೆ ಸುರಕ್ಷಿತ ಎಂದಿದೆ. ಆ ಮೂಲಕ ಕೆಲವರಲ್ಲಿ ಗರ್ಭಿಣಿಯರಿಗೆ ಲಸಿಕೆ ಸುರಕ್ಷತೆಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಸಿಕ್ಕಿದಂತಾಗಿದೆ.