ಬೆಂಗಳೂರು, ಜು. 28 (DaijiworldNews/SM): ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ಮಾಡಿದ ಉತ್ತಮ ಕೆಲಸಗಳನ್ನು ನಾನು ಮುಂದುವರೆಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಸಿಎಂ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ನೂತನ ಸಿಎಂ ಆಗಿ ಆಯ್ಕೆಯಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬೊಮ್ಮಾಯಿಯವರಿಗೆ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮ ಎಲ್ಲಾ ಹಿರಿಯ ನಾಯಕರ ಮಾರ್ಗಸೂಚಿಗಳ ಅಡಿಯಲ್ಲಿ ನಾವು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ತಂಡವಾಗಿ ಕೆಲಸ ಮಾಡುತ್ತೇವೆ.
ನನ್ನ ಮೇಲೆ ನಂಬಿಕೆಯನ್ನು ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಕರ್ನಾಟಕದಲ್ಲಿ ನಿಮ್ಮ ಆದರ್ಶಗಳಾದ ದಕ್ಷ ಮತ್ತು ಪಾರದರ್ಶಕ ಉತ್ತಮ ಆಡಳಿತವನ್ನು ನೀಡುವುದಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತು ಕರ್ನಾಟಕದಲ್ಲಿ “ವಿಭ್ರಾಂತ್ ಭಾರತ್” ಕುರಿತ ನಿಮ್ಮ ದೃಷ್ಟಿ ಈಡೇರಲಿದೆ ಎಂದು ಭರವಸೆ ನೀಡುತ್ತೇನೆ ಎಂಬುವುದಾಗಿ ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಮರು ಟ್ವೀಟ್ ಮಾಡಿದ್ದಾರೆ.