ಬೆಂಗಳೂರು, ಜು 28 (DaijiworldNews/PY): "ನನ್ನ ಮುಂದೆ ಸವಾಲುಗಳಿವೆ ನಿಜ. ಎಲ್ಲಾ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇನೆ" ಎಂದು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಆಗಿ ಪ್ರಮಾನ ವಚನ ಸ್ವೀಕರಿಸಿದ ನಂತರ ಮಾತನಾಡಿದ ಅವರು, "ನನ್ನ ಮುಂದೆ ಆರ್ಥಿಕ, ಸಾಮಾಜಿಕ ಸವಾಲುಗಳಿವೆ. ಸವಾಲುಗಳನ್ನು, ಎಲ್ಲಾ ಸಹೋದ್ಯೋಗಿಗಳ, ಪಕ್ಷದ ಹಿರಿಯ ಸಹಕಾರದಿಂದ ಮೆಟ್ಟಿಲುಗಳಾಗಿ ಮಾಡಿ ಎದುರಿಸುವ ಆತ್ಮ ವಿಶ್ವಾಸವಿದೆ" ಎಂದಿದ್ದಾರೆ.
"ನಮ್ಮ ಸರ್ಕಾರ ದಕ್ಷ, ಪ್ರಾಮಾಣಿಕ ಆಡಳಿತವನ್ನು ಕೊಡುತ್ತದೆ. ಹಿಂದಯಳಿದ ವರ್ಗ ಸೇರಿದಂತೆ ಬಡವರ ಹಾಗೂ ದೀನ ದಲಿತರ ಕಣ್ಣೀರು ಒರೆಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ. ನಾನು ಪ್ರಾದೇಶಿಕ ಸಮತೋಲನವನ್ನು ನಿವಾರಿಸಲು ಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.
"ನಾನು ಸಿಎಂ ಎನ್ನುವುದಕ್ಕಿಂತಲೂ ತಂಡವಾಗಿ ಸರ್ಕಾರ ಕಾರ್ಯನಿರ್ವಹಿಸಲಿದೆ. ಎಲ್ಲರನ್ನೂ ಕೂಡಾ ಒಗ್ಗೂಡಿಸಿಕೊಂಡು ಹೋಗುತ್ತೇನೆ" ಎಂದು ತಿಳಿಸಿದ್ದಾರೆ.