ಬೆಂಗಳೂರು, ಜು 28 (DaijiworldNews/PY): "ಈಗ ವಲಸಿಗರು ನಮ್ಮ ಪಕ್ಷದವರು. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಪಕ್ಷ ತೀರ್ಮಾನಿಸುತ್ತದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ರಾಜಭವನದಲ್ಲಿ ಬಸವರಾಜ ಬೊಮ್ಮಾಯಿ ಅವರ ಪ್ರಮಾಣವಚನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, "ಯಾರು ಮಂತ್ರಿ ಆಗಬೇಕು ಎನ್ನುವುದನ್ನು ಸಿಎಂ ನಿರ್ಧರಿಸುತ್ತಾರೆ. ಪ್ರಾದೇಶಿಕ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಶೀಲಿಸಿ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ" ಎಂದಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್, "ನಮ್ಮಲ್ಲಿ ಯಾವುದೇ ರೀತಿಯಾದ ಗೊಂದಲವಿಲ್ಲ. ಗೊಂದಲವಿಲ್ಲದೇ ಹೊಸ ಸಿಎಂ ಆಯ್ಕೆಯಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಬೊಮ್ಮಾಯಿ ಅವರಿಗೆ ಅನುಭವವಿದೆ. ಸಚಿವ ಸಂಪುಟ ಪಟ್ಟಿ ಸಿಎಂ ಅವರ ಪರಮೋಚ್ಚ ಅಧಿಕಾರ. ಈ ಬಗ್ಗೆ ಅವರು ನೋಡಿಕೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.