ನವದೆಹಲಿ, ಜು 28 (DaijiworldNews/MS): ಮೂರನೆ ಅಲೆಯ ಆತಂಕದ ನಡುವೆ ದೇಶದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 43,654 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಅವಧಿಯಲ್ಲಿ 640 ಜನ ಅಸು ನೀಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕರಣ ಸಕ್ರಿಯ ಪ್ರಕರಣಗಳು ಕೂಡ ದಿಢೀರನೆ ಏರಿಕೆಯಾಗಿರುವುದು ಆತಂಕ ತಂದಿದೆ.
ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತೆ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಮಹಾಮಾರಿ ಅಟ್ಟಹಾಸ ಹೆಚ್ಚುತ್ತಿದೆ.
ಕೇರಳದ ಜಿಲ್ಲೆಗಳಲ್ಲಿ ೧೦೦ ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಪ್ರಸ್ತುತ ದೇಶದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ವರದಿಯಾಗುತ್ತಿದೆ.
ಈ ನಡುವೆ ಕೊರೊನಾ ಸೋಂಕಿನ ಕುರಿತು ಮಂಗಳವಾರ ಕೇಂದ್ರ ಎಚ್ಚರಿಕೆ ನೀಡಿದ್ದು ನಾವು ದಣಿದಿರಬಹುದು ಆದರೆ ಕೊರೊನಾ ವೈರಸ್ ಅಲ್ಲ. ಹೀಗಾಗಿ ಮುಂಬರುವ ಹಬ್ಬಗಳಿಗೂ ಮುಂಚಿತವಾಗಿ ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವ ಅಗತ್ಯವಿದೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ತುಂಬಾ ಎಚ್ಚರಿಕೆವಹಿಸಬೇಕಾಗುತ್ತದೆ. ಅನಗತ್ಯವಾದ ಓಡಾಟಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದೆ.
ಇದರ ನಡುವೆ ಲಸಿಕೆ ಅಭಿಯಾನ ಕೂಡ ಮುಂದುವರೆದಿದ್ದು, ಈವರೆಗೆ 50 ಕೋಟಿ ಜನರು ಲಸಿಕೆ ಪಡೆದಿದ್ದಾರೆ.