ಬೆಂಗಳೂರು, ಜು 28 (DaijiworldNews/MS): ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗುತ್ತಿರುವುದು ಬಹಳ ಸಂತೋಷ. ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಮೋದಿ ಸಂಪುಟ ರಚನೆ ಮಾಡಿದಂತೆ ಇಲ್ಲೂ ಮಾಡಬೇಕು, ಹಳಬರನ್ನು ಹೊಸಬರನ್ನು ಸೇರಿಕೊಂಡು ಸಂಪುಟ ರಚನೆ ಮಾಡಬೇಕು ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ನಾನು ಯಾರ ಮನೆ ಬಾಗಿಲಿಗೂ ಹೋಗೋದಿಲ್ಲ. ನನಗೆ ಯಾವ ಖಾತೆಯೂ ಬೇಡ ಎಂದು ಸಚಿವ ಸ್ಥಾನ ಕೊಡಿ ಅಂತಾ ಯಾರನ್ನೂ ಕೇಳುವುದಿಲ್ಲ ಎಂದು ಇದೇ ವೇಳೆ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಮಂಗಳವಾರವಷ್ಟೇ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೇಮಕಗೊಂಡಿದ್ದರು. ಬೆಳಗ್ಗೆ 11 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ಚಾಂದ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.