ನವದೆಹಲಿ, ಜು 28 (DaijiworldNews/PY): "ಆಗಸ್ಟ್ ತಿಂಗಳಿನಲ್ಲಿ ಜನರಿಗೆ 15 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯವಾಗಲಿದೆ" ಎಂದು ಕೇಂದ್ರ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಕೊರೊನಾದಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ಲಸಿಕೆಯು ಶೇ.98ರಷ್ಟು ಕಡಿಮೆ ಮಾಡಿತ್ತದೆ ಎನ್ನುವ ಸಮೀಕ್ಷಾ ವರದಿಯ ಬೆನಲ್ಲೆ ಲಸಿಕೆಯ ಲಭ್ಯತೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಕೇಂದ್ರ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಲಸಿಕೆಯ ಒಂದು ಭಾಗವನ್ನು ಲಸಿಕೆಯ ಒಂದು ಭಾಗವನ್ನು ಪರೀಕ್ಷಾ ಪ್ರಕ್ರಿಯೆಗಳಿಗಾಗಿ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ನಮ್ಮ ಅಂದಾಜಿನ ಪ್ರಕಾರ, 15 ಕೋಟಿ ಡೋಸ್ ಲಸಿಕೆ ಆಗಸ್ಟ್ ತಿಂಗಳಿನಲ್ಲಿ ಲಭ್ಯವಾಗಲಿದೆ" ಎಂದು ಸರ್ಕಾರದ ಪ್ರಧಾನ ಸಲಹೆಗಾರ ವಿ.ಕೆ.ಪಾಲ್ ಹೇಳಿದ್ದಾರೆ.
"ಈವರೆಗೆ ಜುಲೈನಲ್ಲಿ 12 ಕೋಟಿ ಡೋಸ್ ನೀಡಲಾಗಿದೆ. ಇದು ಜುಲೈನಲ್ಲಿ ಲಭ್ಯವಿದ್ದ ಲಸಿಕೆಗಳಿಗಿಂತ ಹೆಚ್ಚಾಗಿದೆ" ಎಂದು ಮಾಹಿತಿ ನೀಡಿದ್ದಾರೆ.