ಬೆಂಗಳೂರು, ಜು. 27 (DaijiworldNews/SM): ಸಿಎಂ ಬಸವರಾಜ್ ಬೊಮ್ಮಯಿ ಸಂಪುಟದಲ್ಲಿ ಮೂವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ. ವಾಲ್ಮೀಕಿ, ಒಕ್ಕಲಿಗ, ದಲಿತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಲಾಗಿದೆ.
ಶ್ರೀರಾಮುಲು, ಅರವಿಂದ ಕಾರಜೋಳ, ಆರ್ ಅಶೋಕ್ ಅವರನ್ನು ಡಿಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಶಾಸಕಾಂಗ ಸಭೆ ಉಪ ಮುಖ್ಯಮಂತ್ರಿಗಳ ಆಯ್ಕೆ ವಿಚಾರದಲ್ಲಿದ್ದ ಗೊಂದಲಕ್ಕೆ ತೆರೆ ಎಳೆದಿದೆ.