ಬೆಂಗಳೂರು, ಜು.27 (DaijiworldNews/HR): ಬಿಜೆಪಿ ಹೈಕಮಾಂಡ್ ಪಾಲಿಗೆ ರಾಜ್ಯದ ಜನರೇನು ಪ್ರಯೋಗ ಪಶುಗಳೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡು ರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಬಿಜೆಪಿ ಹೈಕಮಾಂಡ್ ಪಾಲಿಗೆ ರಾಜ್ಯದ ಜನರೇನು ಪ್ರಯೋಗ ಪಶುಗಳೆ? 2019ರಲ್ಲಿ ನೆರೆ ಬಂದಾಗ ಸಚಿವ ಸಂಪುಟ ರಚನೆಗೆ ಅವಕಾಶ ಕೊಡದೆ ಪ್ರವಾಹದಲ್ಲಿ ಜನ ನರಳುವಂತೆ ಮಾಡಿತ್ತು.ಅಲ್ಲದೆ ಈಗ ನೆರೆ ಬಂದಿರುವ ಸಂದರ್ಭದಲ್ಲೂ ಮುಖ್ಯಮಂತ್ರಿಯನ್ನು ಬದಲಾಯಿಸಿ ಸರ್ಕಾರವೇ ಇಲ್ಲದಂತೆ ಮಾಡಿದೆ" ಎಂದಿದ್ದಾರೆ.
ಇನ್ನು ಜನರ ತಾಳ್ಮೆ ಪರೀಕ್ಷಿಸುತ್ತಿರುವ ಬಿಜೆಪಿಯವರಿಗೆ ಜನರೇ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.