ನವದೆಹಲಿ, ಜು.27 (DaijiworldNews/HR): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜುಲೈ 27ರಿಂದ ಐದು ದಿನ ದೆಹಲಿ ಪ್ರವಾಸದಲ್ಲಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನುಭೇಟಿಯಾಗಿ ಪ್ರಮುಖ ವಿಚಾರಗಳ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಮಮತ ಆಪ್ತ ವಲಯದ ಒಬ್ಬರು, "ಪ್ರಧಾನಿಯವರಿಗೆ ಯಾಸ್ ಚಂಡ ಮಾರುತದ ರಾಜ್ಯ ಸರ್ಕಾರದ ವರದಿಯನ್ನು ಹಸ್ತಾಂತರಿಸಿದ್ದು, ಡಿಜಿಪಿ ನೇಮಕಾತಿ ಬಗ್ಗೆ, ಯಾಸ್ ಚಂಡ ಮಾರುತದಿಂದ ಆದ ನಷ್ಟಕ್ಕೆ ಆರ್ಥಿಕ ನೆರವು ಹಾಗೂ ಕೊರೊನಾ ಲಸಿಕಗಳ ಪೂರೈಕೆಯನ್ನು ಹೆಚ್ಚಿಸುವುದರ ಬಗ್ಗೆ ಮಾತುಕತೆ ನಡೆಸಲಾಯಿತು. ಇನ್ನು, ಇಂಧನ ಬೆಲೆ ಹೆಚ್ಚಳದ ಬಗ್ಗೆಯೂ ಕೂಡ ಚರ್ಚೆ ನಡೆಸಿದ್ದಾರೆ" ಎಂದು ತಿಳಿಸಿದರು.
ಇನ್ನು ಜುಲೈ 28ರಂದು ಕಾಂಗ್ರಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹಾಗೂ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುತ್ತಾರೆ ಎಂದು ಸುದ್ದಿ ಮೂಲಗಳು ತಿಳಿಸಿದೆ.
ಈ ಸಭೆಯ ಮೊದಲು ಬಂಗಾಳ ಸಿಎಂ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಮತ್ತು ಆನಂದ್ ಶರ್ಮಾ ಅವರನ್ನು ಇಂದು ಭೇಟಿಯಾದರು. ಸಂಜೆ 6.30 ಕ್ಕೆ ಮುಖ್ಯಮಂತ್ರಿ ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಅಭಿಷೇಕ್ ಮನು ಸಿಂಗ್ವಿ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.