ಶಿರಸಿ,ಜು.27 (DaijiworldNews/HR): "ಪಕ್ಷದ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿ ಅವರು ಸಚಿವರ ಆಯ್ಕೆ ಮಾಡುತ್ತಾರೆ ಅದು ಅವರ ವಿವೇಚನೆಗೆ ಬಿಟ್ಟಿದ್ದು. ಹುದ್ದೆ ಬೇಡ ಎನ್ನಲು ನಾನೇನು ಸನ್ಯಾಸಿಯಲ್ಲ" ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಬಾಂಬೆ ಟೀಮ್ ಎಂಬುದು ಈಗ ಮುಗಿದ ಅಧ್ಯಾಯವಾಗಿದ್ದು, ನಾವೆಲ್ಲ ಬಿಜೆಪಿ ಶಾಸಕರು. ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಹಿರಿಯರೇ ತೀರ್ಮಾನಿಸುತ್ತಾರೆ" ಎಂದರು.
ಇನ್ನು "ಯಡಿಯೂರಪ್ಪ ಅವರು ಪಕ್ಷದ ಶಿಸ್ತು, ಸಿದ್ಧಾಂತಕ್ಕೆ ತಲೆಬಾಗಿ ರಾಜೀನಾಮೆ ನೀಡಿದ್ದು, ಅದರಲ್ಲಿ ಬೇಸರವಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ತಲೆಬಾಗುತ್ತೇವೆ" ಎಂದು ಹೇಳಿದ್ದಾರೆ.