ಬೆಂಗಳೂರು, ಜು.27 (DaijiworldNews/HR): "ಬಿ.ಎಸ್. ಯಡಿಯೂರಪ್ಪ ಅವರು ಯಾವ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆಯನ್ನು ನೀಡಿದ್ದಾರೆ ಎಂಬುದನ್ನು ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು" ಎಂದು ಮಾಜಿ ಡಿಸಿಎಂ ಪರಮೇಶ್ವರ್ ಅವರು ಬಿಜೆಪಿ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಏಕಾಏಕಿ ರಾಜೀನಾಮೆಯನ್ನು ನೀಡಿರುವ ಉದ್ದೇಶ ಏನಿತ್ತು, ಅವರು ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಬಿಜೆಪಿ ಹೈಕಮಾಂಡ್ ರಾಜ್ಯದ ಜನತೆಗೆ ತಕ್ಷಣ ತಿಳಿಸಬೇಕು" ಎಂದಿದ್ದಾರೆ.
ಇನ್ನು "ಬಿಜೆಪಿಯು ಈಗಾಗಲೇ ಹೇಳಿರುವಂತೆ ಬಿಎಸ್ ವೈ ಅವರ ಮಗ ಮತ್ತು ಕುಟುಂಬದವರಿಂದಲೇ ರಾಜೀನಾಮೆ ಪಡೆಯುವಂತಾಯಿತು ಎಂದು ಹಾಗೂ ವಿವಿಧ ವಿಚಾರಗಳು ಅವರ ಪಕ್ಷದವರೇ ಹೇಳಿದ್ದಾರೆ ಹಾಗಾಗಿ ಯಾವ ಉದ್ದೇಶಕ್ಕೆ ರಾಜೀನಾಮೆ ನೀಡಿದ್ದಾರೆ, ಅಲ್ಲದೆ ಇದರ ಹಿಂದಿನ ಮರ್ಮ ಏನು ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು" ಎಂದು ಹೇಳಿದ್ದಾರೆ.