ಸಂಗ್ಲಾ, ಜು.26 (DaijiworldNews/HR): ಹಿಮಾಚಲ ಪ್ರದೇಶದ ನಾಗಸ್ತಿ ಪೋಸ್ಟ್ ಬಳಿ ನಿಂತುಕೊಂಡು ಜೈಪುರದ 34 ವರ್ಷದ ವೈದ್ಯೆ ದೀಪಾ ಶರ್ಮಾ ಎಂಬವರು "ನಾಗರಿಕರನ್ನು ಪ್ರವೇಶಿಸಲು ಬಿಡುವ ಭಾರತದ ತುತ್ತ ತುದಿಯಲ್ಲಿ ನಿಂತಿರುವೆ. ಈ ತುದಿಯಿಂದ 80 ಕಿಮೀ ಮುಂದಕ್ಕೆ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ಟಿಬೆಟ್ ಜೊತೆಗೆ ನಮ್ಮ ಗಡಿ ಇದೆ" ಎಂದು 12:59ರಲ್ಲಿ ಪೋಸ್ಟ್ ಮಾಡಿದ್ದು, ಅದೇ ದಿನ 1:25ರ ಮದ್ಯಾಹ್ನದ ವೇಳೆಗೆ ಭಾರೀ ಮಳೆಯ ಕಾರಣದಿಂದ ಭೂಕುಸಿತವಾಗಿ, ಅದೇ ಜಾಗದಲ್ಲಿ ದೊಡ್ಡ ಬಂಡೆಗಳು ಪ್ರವಾಸಿಗರು ಸಾಗುತ್ತಿದ್ದ ಟೆಂಫೋ ಟ್ರಾವೆಲರ್ ಮೇಲೆ ಬಿದ್ದ ಸುದ್ದಿ ವೈರಲ್ ಆಗಿದೆ.
ದೀಪಾ ಶರ್ಮಾ ಆಯುರ್ವೇದ ವೈದ್ಯೆಯಾಗಿದ್ದು, ಘಟನೆಯಲ್ಲಿ ಮೃತಪಟ್ಟಿದ್ದು, ಮಹಿಳೆಯರಿಗೆ ತಮ್ಮ ಮೂಲ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಹಾಗೂ ಎನ್ಜಿಓ ಒಂದರ ಜೊತೆಗೆ ಕೆಲಸ ಮಾಡಲು ದೀಪಾ ಶರ್ಮಾ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ.
ಇನ್ನು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಸಂಗ್ಲಾದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಒಂಬತ್ತು ಮಂದಿ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.