ಶ್ರೀನಗರ, ಜು 26 (DaijiworldNews/PY): ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರು ನಡೆಸಿದ ದಾಳಿಗೆ ಓರ್ವ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಬಾರಾಮುಲ್ಲಾ ಜಿಲ್ಲೆಯ ಚಂದೂಸಾ ಎನ್ನುವ ಪ್ರದೇಶದಲ್ಲಿ ಫಜಲ್ ಅಹ್ಮದ್ ಎನ್ನುವ ವ್ಯಕ್ತಿಗೆ ಭದ್ರತೆ ನೀಡಲಾಗಿತ್ತು. ಇಂದು ಮುಂಜಾನೆ ಸ್ಥಳಕ್ಕೆ ಆಗಮಿಸಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ತಂಡದಲ್ಲಿದ್ದ ಪೇದೆ ಅಲ್ತಾಫ್ ಎನ್ನುವವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಭದ್ರತೆ ಒದಗಿಸಲಾಗಿದ್ದ ಫಜರ್ ಅಹ್ಮದ್ ಅವರು ಮಾಜಿ ಉಪ ಮುಖ್ಯಮಂತ್ರಿ ಮುಜಾಫರ್ ಬೇಗ್ ಅವರ ಸಹೋದರನಗಿದ್ದಾರೆ ಎಂದು ತಿಳಿದುಬಂದಿದೆ.