ನವದೆಹಲಿ, ಜು 26 (DaijiworldNews/PY): 1999ರಲ್ಲಿ ಪಾಕಿಸ್ತಾನದೊಂದಿಗೆ ಹೋರಾಡಿ ಗೆದ್ದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್ ವಿಜಯ್ ದಿವಸ್ನಲ್ಲಿ ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ಕಾರ್ಗಿಲ್ ದಿವಸ್ ಆಗಿದ್ದು, ಭಾರತೀಯ ಯೋಧರ ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಶೌರ್ಯ ನಮಗೆ ನೆನಪಿದೆ. ನಮ್ಮ ದೇಶವನ್ನು ರಕ್ಷಿಸುವ ಕಾರ್ಗಿಲ್ನಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ. ಅವರ ಶೌರ್ಯ ನಮ್ಮನ್ನು ಪ್ರೇರೇಪಿಸುತ್ತದೆ" ಎಂದಿದ್ದಾರೆ.
ಜುಲೈ 26, 1999 ರಂದು ಭಾರತದ ಯೋಧರು ಪಾಕಿಸ್ತಾನವನ್ನು ಸೋಲಿಸಿತ್ತು. ಪ್ರತಿ ವರ್ಷ, ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಜುಲೈ 26 ರಂದು ಕಾರ್ಗಿಲ್ ದಿವಸ್ ಅನ್ನು ಆಚರಿಸುತ್ತದೆ.