ಬೆಂಗಳೂರು, ಜು 26 (DaijiworldNews/MS): ಅಭಿನಯ ಶಾರದೆ ಎಂದು ಖ್ಯಾತಿ ಪಡೆದಿದ್ದ ಸ್ಯಾಂಡಲ್ ವುಡ್ ಹಿರಿಯ ನಟಿ ಜಯಂತಿ (76) ಅವರು ನಿಧನರಾಗಿದ್ದಾರೆ.
ಜನವರಿ 6, 1945ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿಯವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿದ್ದು ತಾಯಿ ಸಂತಾನಲಕ್ಷ್ಮೀ ಗೃಹಿಣಿಯಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ 70-80ರ ದಶಕದಲ್ಲಿ ಪ್ರಮುಖ ನಾಯಕಿಯರಲ್ಲಿ ಒಬ್ಬರು. 1968ರಲ್ಲಿ ತೆರೆ ಕಂಡ ವೈ,ಅರ್,ಸ್ವಾಮಿ ನಿರ್ದೇಶನದ "ಜೇನು ಗೂಡು " ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು"ಕಮಲ ಕುಮಾರಿ. ಅದಕ್ಕಿಂತ ಮುನ್ನ "ಜಗದೇಕ ವೀರನ ಕಥೆ "ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದರು.
ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು 1965ರ "ಮಿಸ್ ಲೀಲಾವತಿ" ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ."ಎರಡು ಮುಖ"(1969),ಮನಸ್ಸಿನಂತೆ ಮಾಂಗಲ್ಯ"(1976),"ಧರ್ಮ ದಾರಿ ತಪ್ಪಿತು"(1981),ಮಸಣದ ಹೂವು (1985),"ಆನಂದ್ "(1986) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.