ಬೆಂಗಳೂರು, ಜು. 25 (DaijiworldNews/SM): ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜುಲೈ 26ರಂದು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುವುದಾಗಿ ಹೇಳಿದ್ದು, ಈ ನಡುವೆ ಸೋಮವಾರದಂದೇ ಹೈಕಮಾಂಡ್ ನ ಸಂದೇಶ ಕೂಡ ಬರುವುದಿದೆ. ಈ ಹಿನ್ನೆಲೆ ಸಿಎಂ ಅವರ ನಡೆ ಕುತೂಹಲ ಕೆರಳಿಸಿದೆ.
ಈ ಹಿಂದೆ ಯಡಿಯೂರಪ್ಪರ ಉತ್ತರ ಕನ್ನಡ ಪ್ರವಾಸಕ್ಕೆ ಹಲವು ಬಾರಿ ದಿನ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ರದ್ದುಪಡಿಸಲಾಗಿತ್ತು. ಹಲವು ದಿನಾಂಕಗಳನ್ನು ಮುಂದೂಡಲಾಗುತ್ತಿತ್ತು. ಆದರೆ, ಇದೀಗ ಮತ್ತೆ ಉತ್ತರ ಕನ್ನಡ ಪ್ರವಾಸಕ್ಕೆ ಮುಂದಾಗಿದ್ದು, ಸೋಮವಾರ ಪ್ರವಾಸ ಕೈಗೊಳ್ಳಲಿದ್ದಾರಾ ಎನ್ನುವುದು ಸದ್ಯ ಪ್ರಶ್ನೆಯಾಗಿದೆ.