ಉಡುಪಿ, ಜು. 25 (DaijiworldNews/SM): ಮಹಿಳೆಯರ ಕಲ್ಯಾಣಕ್ಕಾಗಿ ನಿಲ್ಲಬೇಕಾದ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಗರ್ಭಿಣಿ ಮಹಿಳೆಯರಿಗೆ ನೀಡುವ ಮೊಟ್ಟೆಯಲ್ಲಿಯೂ ಅವ್ಯವಹಾರಕ್ಕೆ ಮುಂದಾಗಿದ್ದು ಮಹಿಳಾ ವರ್ಗಕ್ಕೆ ಕಳಂಕ ಎಂದು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಲ್ಮಾ ಜೇನಿಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕರು ಕೊರೋನದಿಂದ ಒಂದುಹೋತ್ತಿನ ಊಟಕ್ಕೂ ಕಂಗಾಲಾಗಿರುವಾಗ ಬಿಜೆಪಿ ಸರಕಾರದ ಸಚಿವರು, ಶಾಸಕರು ಲೂಟಿ ಮಾಡುವ ನಾಚಿಕೆಗೇಡು ಕಾಯಕದಲ್ಲಿ ತೊಡಗಿರುವುದು ಅಸಹ್ಯ ಹುಟ್ಟಿಸುತ್ತಿದೆ.
ಒಬ್ಬ ಮಹಿಳೆಯಾಗಿ ಗರ್ಭಿಣಿಯರಿಗೆ ದೊರಕುವ ಊಟವನ್ನು ಕಸಿಯುವುದು ನ್ಯಾಯವೇ? "ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರವನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳುತ್ತಾರೆ. ಆದರೆ ಶಶಿಕಲಾ ಜೊಲ್ಲೆಯವರ ವಿಷಯದಲ್ಲಿ ಮಹಿಳೆಯರು ತಲೆ ತಗ್ಗಿಸುವತಾಗಿದೆ. ಇವರಿಗೆ ಸಚಿವೆಯಾಗಿ ಮಾತ್ರವಲ್ಲ ಶಾಸಕಿಯಾಗಿ ಮುಂದುವರಿಯುವ ಯಾವ ಅರ್ಹತೆಯೂ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.