ಶಿಮ್ಲಾ, ಜು.25 (DaijiworldNews/HR): ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅದರಿಂದಾಗಿ ಸೇತುವೆಯೂ ಮುರಿದುಬಿದ್ದು ಘಟನೆಯಲ್ಲಿ 9 ಪ್ರವಾಸಿಗರು ಮೃತಪಟ್ಟ ಘಟನೆ ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಸಾಂಗ್ಲಾ ಕಣಿವೆಯಲ್ಲಿ ಈ ಘಟನೆ ನಡೆದಿದ್ದು, ಸೇತುವೆಯ ಬಳಿ ಪ್ರವಾಸಿಗರ ವಾಹನಗಳಿದ್ದವು. ಅದರ ಮೇಲೆ ಬಂಡೆ ಉರುಳಿ ಬಿದ್ದಿದ್ದರಿಂದಾಗಿ ಅವರ 11 ಪ್ರವಾಸಿಗರಿಗೆ ಗಾಯವಾಗಿದೆ. ಅದರಲ್ಲಿ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಎಸ್ಪಿ ಕಿನ್ನೌರ್ನ ಸಾಜು ರಾಮ್ ರಾಣಾ ತಿಳಿಸಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಾಳುವಾದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೈದ್ಯರ ತಂಡವನ್ನೂ ಕರೆಸಲಾಗಿದೆ ಎಂದು ತಿಳಿಸಲಾಗಿದೆ.
ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.