ಕೊಲ್ಕತ್ತಾ, ಜು.25 (DaijiworldNews/HR): ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಸುಮಾರು 30 ಅಂಗಡಿಗಳು ಬೂದಿಯಾಗಿರುವ ಘಟನೆ ನಗರದ ಉತ್ತರ ಭಾಗದ ಕೆಸ್ತೋಪುರದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಬೆಂಕಿ ನಂದಿಸಲು ಹದಿನೈದು ಅಗ್ನಿಶಾಮಕ ದಳಗಳು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಜ್ವಾಲೆ ಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಸುಟ್ಟ ಗಾಯಗಳಿಗೆ ಒಳಗಾದ ಸ್ಥಳೀಯ ನಿವಾಸಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಅಂಗಡಿಯಲ್ಲಿನ ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದ ಜ್ವಾಲೆ ಉರಿಯಿತು ಮತ್ತು ಇತರ ಅಂಗಡಿಗಳಿಗೆ ಬೆಂಕಿ ಹರಡುವ ವಸ್ತುಗಳು ಇರುವುದರಿಂದ ಬೆಂಕಿ ಅನಾಹುತವಾಗಿದೆ ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.