ಪಾಟ್ನಾ, ಜು.25 (DaijiworldNews/HR): 17 ವರ್ಷದ ಬಾಲಕನನ್ನು ಥಳಿಸಿ ಹತ್ಯೆಗೈದು ಆತನ ಜನನಾಂಗವನ್ನು ಕತ್ತರಿಸಿದ್ದು, ಇದರಿಂದ ಕೋಪಗೊಂಡ ಸಂತ್ರಸ್ತ ಬಾಲಕನ ಮನೆಯವರು ಆರೋಪಿಯ ಮನೆಯ ಮುಂದೆಯೇ ಬಾಲಕನ ಅಂತ್ಯ ಕ್ರಿಯೆ ನೆರವೇರಿಸಿದ ಘಟನೆ ಬಿಹಾರದ ಮುಝಾಫ್ಫರ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ರೆಪುರ ರಾಂಪುರ್ ಶಾ ಗ್ರಾಮದ ನಿವಾಸಿ ಸೌರಭ್ ಕುಮಾರ್ ಪಕ್ಕದ ಹಳ್ಳಿಯಾದ ಸೊರ್ಬರಾದಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗಿದ್ದು, ಬಾಲಕನ ಧೈರ್ಯ ನೋಡಿ ಕೋಪಗೊಂಡ ಬಾಲಕಿಯ ಸಂಬಂಧಿಕರು ಆತನಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸೌರಭ್ ಕುಮಾರ್ನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಅದೇ ರಾತ್ರಿ ಚಿಕಿತ್ಸೆಯ ಸಮಯದಲ್ಲಿ ಬಾಲಕ ಗಂಭೀರ ಗಾಯದಿಂದಾಗಿ ಮೃತಪಟ್ಟಿದ್ದು, ಈ ಬಗ್ಗೆ ಮಾಹಿತಿ ಪಡೆದ ಕಾಂತಿ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಪ್ರೇಮ ಸಂಬಂಧದ ಕಾರಣಕ್ಕೆ ಬಾಲಕನನ್ನು ಕೊಲ್ಲಲಾಗಿದೆ ಎಂದು ಮೆಲ್ನೋಟಕ್ಕೆ ಕಂಡುಬಂದಿದ್ದು, ಬಾಲಕನ್ನು ನಿರ್ದಯವಾಗಿ ಥಳಿಸಲಾಯಿತು ಹಾಗೂ ಆತನ ಜನನಾಂಗವನ್ನು ಕತ್ತರಿಸಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಗಾಯಗಳ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ. ಪ್ರಕರಣಕ್ಕೆ ಸಂಬಂಧಿಸಿ ಸುಶಾಂತ್ ಪಾಂಡೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.