ಕೊಪ್ಪಳ, ಜು.25 (DaijiworldNews/HR): "ಬಿಜೆಪಿ ಎಂದರೆ ಬ್ಯುಸಿನೆಸ್ ಜನತಾ ಪಾರ್ಟಿ" ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನಪರ ಕೆಲಸ ಮಾಡುವ ಸರ್ಕಾರ ಅಂದರೆ ಅದು ಕಾಂಗ್ರೆಸ್ ಪಕ್ಷವಾಗಿದ್ದು, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರ ಸೇವೆಯನ್ನು ಮಾಡಲಿದೆ" ಎಂದರು.
ಇನ್ನು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರೋದು, ಕೇವಲ ವ್ಯವಹಾರಕ್ಕಾಗಿಯೇ ಆಗಿದ್ದು, ಹೀಗೆ ವ್ಯವಹಾರಕ್ಕಾಗಿ ಅಧಿಕಾರಕ್ಕೆ ಬರೋ ಬಿಜೆಪಿ ಪಕ್ಷಕ್ಕೆ, ವ್ಯವಹಾರ ಕುದುರದೇ ಹೋದರೆ ಬಿದ್ದು ಹೋಗುತ್ತದೆ. ಇಡೀ ದೇಶ ಲೂಟಿ ಮಾಡಿ, ಹಾಳು ಮಾಡಿ ಹೋಗುತ್ತದೆ. ಸದ್ಯಕ್ಕೇ ಅದೇ ಪರಿಸ್ಥಿತಿ ಇದೆ. ಸರ್ಕಾರ ಬಿದ್ದು ಹೋಗುವಂತ ಹಂತಕ್ಕೆ ತಲುಪಿದೆ" ಎಂದು ಹೇಳಿದ್ದಾರೆ.