ನವದೆಹಲಿ, ಜು.25 (DaijiworldNews/HR): ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ನೀವು ಸ್ಪೂರ್ತಿ ತುಂಬಿ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಭಾನುವಾರ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ 79ನೇ ಸರಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ದೇಶ ಆಚರಣೆ ಮಾಡುತ್ತಿದ್ದು, ಅಂದು ಎಷ್ಟು ಜನರು ಸಾಧ್ಯವೋ ಅಷ್ಟು ಜನರು ಸೇರಿಕೊಂಡು ರಾಷ್ಟ್ರಗೀತೆಯನ್ನು ಹಾಡಿ. ರಾಷ್ಟ್ರಗಾನ ಡಾಟ್ ಕಾಮ್ ಮೂಲಕದನ್ನು ರೆಕಾರ್ಡ್ ಮಾಡಲು ಅವಕಾಶವನ್ನು ನೀಡಲಾಗಿದೆ. ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಕರೆ ನೀಡಿದರು.ಎಂದರು.
ಇನ್ನು ಆತ್ಮ ನಿರ್ಭರ ಭಾರತ್ ನಮ್ಮ ಕನಸು ಅದನ್ನು ನಾವೆಲ್ಲರೂ ಸಾಕಾರಗೊಳಿಸೋಣ, ದೇಶದ ಜನತೆ ಕೈಮಗ್ಗದ ಬಟ್ಟೆ ಖರೀದಿ ಮಾಡಿದರೆ ದೇಶದ ಬಡ ಜನರಿಗೆ ನೆರವಾಗಲಿದ್ದು, ಖಾದಿ ಮಳಿಗೆಯಲ್ಲಿ ಒಂದು ದಿನದಲ್ಲಿ 1 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬುದನ್ನು ತೋರಿಸಿದ್ದೀರಿ" ಎಂದಿದ್ದಾರೆ.
"ಮನ್ ಕೀ ಬಾತ್ನಲ್ಲಿ ನಾವು ದೇಶದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದು, ಇಲ್ಲಿ ಹೊಸ ಹೊಸ ಉದ್ಯಮಗಳಿಗೆ ಯೋಜನೆಗಳು ಸಿಗುತ್ತವೆ. ಯುವಕರು ಈ ಮೂಲಕ ಪ್ರೇರಿತರಾಗಿ ಕಾರ್ಯ ನಿರ್ವಹಣೆ ಮಾಡಲು ಅನುಕೂಲವಾಗಿದ್ದು, ಜೊತೆಗೆ ನಾವು ತಂತ್ರಜ್ಞಾನದ ವಿಚಾರದ ಬಗ್ಗೆ ಮಾತನಾಡುತ್ತೇವೆ. ಮದ್ರಾಸ್ ಐಐಟಿಯ ವಿದ್ಯಾರ್ಥಿಗಳು 3ಡಿ ಪ್ರಿಂಟಿಂಗ್ ಯೂನಿಟ್ ಸ್ಥಾಪನೆ ಮಾಡಿದ್ದು, ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನದಿಂದ ಕೆಲಸಗಳು ಬೇಗ ನಡೆಯುತ್ತಿವೆ" ಎಂದರು.
ಇನ್ನು ನಾವು ಹೊಸದನ್ನು ಕಲಿಯಬೇಕಾದರೆ ಪ್ರಯೋಗಳನ್ನು ಮಾಡಬೇಕು. ರೈತರು, ಯುವಕರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ" ಎಂದು ಹೇಳಿದ್ದಾರೆ.