ಹೈದರಾಬಾದ್, ಜು 25 (DaijiworldNews/PY): "ಅಸಾದುದ್ದೀನ್ ಒವೈಸಿ ನಾಯಕತ್ವದ ಎಐಎಮ್ಐಎಮ್ ಪಕ್ಷ ಮುಂಬರುವ ಉತ್ತರಪ್ರದೇಶದ ಚುನಾವಣೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ವರ್ಧಿಸಲಿದೆ" ಎಂದು ತಿಳಿಸಿದೆ.
ಉತ್ತರ ಪ್ರದೇಶದ ಎಐಎಮ್ಐಎಮ್ ಪಕದ ರಾಜ್ಯ ಘಟಕದ ಅಧ್ಯಕ್ಷ ಶೌಕತ್ ಅಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, "ನಾವು ವಿಧಾನಸಭಾ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸಲಿದ್ದೇವೆ. ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿಲ್ಲ" ಎಂದಿದ್ದಾರೆ.
"ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಮುಸಲ್ಮಾನ್ ನಾಯಕನಿಗೆ ನೀಡುವುದಾದರೆ ಮಾತ್ರವೇ ಮೈತ್ರಿಗೆ ಒಪ್ಪುತ್ತೇವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಈ ಬಗ್ಗೆ ನಾನು ಅಥವಾ ಪಕ್ಷದ ಮುಖಂಡ ಅಸದುದ್ದೀನ್ ಒವೈಸಿ ಎಲ್ಲಿಯೂ ಹೇಳಿಕೊಂಡಿಲ್ಲ" ಎಂದು ತಿಳಿಸಿದ್ದಾರೆ.
ಈ ಹಿಂದೆ ಅಸದುದ್ದೀನ್ ಒವೈಸಿ ಅವರು ಲಕ್ನೋಗೆ ಭೇಟಿ ನೀಡಿದ್ದು, ಚುನಾವಣಾ ಮೈತ್ರಯ ವಿಚಾರವಾಗಿ ಪ್ರದೇಶಿಕ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿವೆ.