ನವದೆಹಲಿ, ಜು 25 (DaijiworldNews/PY): "ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 45.37 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದೆ" ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.
"ಕೇಂದ್ರವು ರಾಜ್ಯಗಳಿಗೆ ಈವರೆಗೆ 45.37 ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಕೆ ಮಾಡಿದ್ದು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾದ 3,29,38,559 ಡೋಸ್ ಕೊರೊನಾ ಲಸಿಕೆಗಳಿವೆ" ಎಂದು ತಿಳಿಸಿದೆ.
"ತ್ಯಾಜ್ಯಗಳು ಸೇರಿದಂತೆ ಒಟ್ಟು 42,08,32,021 ಲಸಿಕೆಗಳ ಬಳಕೆಯಾಕೆಯಾಗಿದ್ದು, ಇನ್ನು ಕೆಲವು ದಿನಗಳಲ್ಲಿ 11,79,010 ಡೋಸ್ ಲಸಿಕೆಗಳನ್ನು ವಿತರಿಸಲಾಗುತ್ತದೆ" ಎಂದಿದೆ.
"ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿ ಈವರೆಗೆ ಒಟ್ಟು 43,31,50,864 ಮಂದಿಗೆ ಲಸಿಕೆ ನೀಡಲಾಗಿದೆ" ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.