ಮುಂಬೈ, ಜು.25 (DaijiworldNews/HR): ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಮಳೆಯ ಪರಿಣಾಮ ಕೊಲ್ಲಾಪುರ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ 21 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗಗನ್ ಬೌಡಾ ತಾಲೂಕಿನ ಧುಂಡ್ವಾಡೆ ಗ್ರಾಮದ ರಸ್ತೆ ಕುಸಿದಿದ್ದು, ಅಂಡೂರು ಅಣೆಕಟ್ಟು ಕುಸಿಯುವ ಭೀತಿ ಶುರುವಾಗಿದೆ. ರಸ್ತೆ ಕುಸಿದಿ ಹಿನ್ನೆಲೆಯಲ್ಲಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ ಎನ್ನಲಾಗಿದೆ.
ಇನ್ನು ಧೋಕವಾಲೆ, ಮಿರ್ಗಾಂವ್ನಲ್ಲಿ ಶನಿವಾರ ಸಂಭವಿಸಿದ ಭೂ ಕುಸಿತದಲ್ಲಿ 21 ಮಂದಿ ಮೃತಪಟ್ಟಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಿಗಾಗಿ ಎನ್ಡಿಆರ್ಎಫ್ ತಂಡ ಶೋಧ ಕಾರ್ಯ ನಡೆಸುತ್ತಿದೆ.