ಪಣಜಿ, ಜು 24 (DaijiworldNews/PY): "ನಿರಂತರ ಮಳೆಯ ಪರಿಣಾಮ ಗೋವಾ-ಕರ್ನಾಟಕ ಗಡಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಎರಡನೇ ದಿನವೂ ಉಭಯ ರಾಜ್ಯಗಳ ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ" ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿ ವಿಭಾಗದ ದೂಧ್ಸಾಗರ್ ಹಾಗೂ ಸೊನಾಲಿಮ್, ಕಾರಂಜೋಲ್ ಹಾಗೂ ದೂಧ್ಸಾಗರ್ ಗುಡ್ಡಗಾಡು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿತ್ತು" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
"ಭಾರೀ ಮಳೆಯ ಪರಿಣಾಮ ಮಹಾರಾಷ್ಟ್ರದ ರತ್ನಾಗಿರಿ ಬಳಿಯ ವಶಿಷ್ಟಿ ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಮಂಗಳೂರು ಜಂಕ್ಷನ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ಈ ರೈಲು ದೂಧ್ಸಾಗರ್ ಹಾಗೂ ಸೋನಾಲಿಮ್ ನಡುವೆ ಹಳ್ಳಿ ತಪ್ಪಿತ್ತು" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.