ಧಾರವಾಡ,ಜು.24 (DaijiworldNews/HR): ಕರ್ನಾಟಕದ ಮುಖ್ಯಮಂತ್ರಿ ರೇಸ್ನಲ್ಲಿ ನನ್ನ ಹೆಸರಿರುವುದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಆದರಿಸಿ ನಾನು ಹೇಳುವುದಾದರೆ, ಬಿಎಸ್ವೈ ಮತ್ತು ಬಿಜೆಪಿ ಹೈಕಮಾಂಡ ಮಧ್ಯ ಏನೋ ಮಾತುಕತೆ ನಡೆದಿರಬಹುದು. ಆದರೆ ಅದು ಏನು ಎಂಬುದು ನನಗೂ ಸಹ ಗೊತ್ತಿಲ್ಲ. ಆ ಯಾವುದೇ ಚರ್ಚೆಯಲ್ಲಿ ನಾನಿಲ್ಲ. ಮುಖ್ಯಮಂತ್ರಿ ರೇಸ್ನಲ್ಲಿ ನನ್ನ ಹೆಸರಿರುವುದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ" ಎಂದಿದ್ದಾರೆ.
ಇನ್ನು ನೀವು ಕೇಂದ್ರ ಹೇಳಿದರೆ ಸಿಎಂ ಹುದ್ದೆ ಒಪ್ಪಿಕೊಳ್ಳುತ್ತೀರಾ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾನು ಕಾಲ್ಪನಿಕ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ" ಎಂದು ಹೇಳಿದ್ದಾರೆ.