ನವದೆಹಲಿ, ಜು 24 (DaijiworldNews/PY): "ಸೆಪ್ಟೆಂಬರ್ ತಿಂಗಳಿನಿಂದ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗುವ ಸಾಧ್ಯತೆ ಇದೆ" ಎಂದು ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
"ಈಗಾಗಲೇ ಫೈಜರ್ ಲಸಿಕೆಗೆ ಯುಸ್ ರೆಗ್ಯುಲೇಟರ್ ಎಫ್ಡಿಎ ಅನುಮೋದನೆ ನೀಡಿದೆ. ಈ ಹಿನ್ನೆಲೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಾರಂಭವಾಗಲಿದೆ ಎನ್ನುವ ವಿಶ್ವಾಸವಿದೆ. ಇದು ಕೊರೊನಾ ಸರಪಳಿಗೆ ಬ್ರೇಕ್ ಹಾಕಲು ಪ್ರಮುಖವಾಗಿರಲಿದೆ" ಎಂದಿದ್ದಾರೆ.
"ಭಾರತದಲ್ಲಿ ಇಲ್ಲಿಯವರೆಗೆ 42 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಎಲ್ಲಾ ವಯಸ್ಕರಿಗೆ ಈ ವರ್ಷಾಂತ್ಯಕ್ಕೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನಡುವೆ ಕೊರೊನಾದ ಮೂರನೇ ಅಲೆ ಭೀತಿ ಇದ್ದು, ಶೀಘ್ರವೇ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಬೇಕಿದೆ" ಎಂದು ತಿಳಿಸಿದ್ದಾರೆ.
ಈಗಾಗಲೇ ಜೈಡಸ್ ಕಂಪೆನಿ ಲಸಿಕಾ ಟ್ರಯಲ್ ಮುಗಿಸಿ, ದೃಢೀಕರಣಕ್ಕೆ ಕಾಯುತ್ತಿದೆ ಎಂದು ಭಾವಿಸಿದ್ದೇನೆ. ಆಗಸ್ಟ್ ಅಥವಾ ಸೆಪ್ಟೆಂಬರ್ಗೆ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಟ್ರಯಲ್ಸ್ ಮುಗಿಯಲಿದ್ದು, ಇದಾದ ನಂತ ಅನುಮೋದನೆ ಪಡೆದುಕೊಳ್ಳಲಿದೆ.