ಚಿಕ್ಕಮಗಳೂರು, ಜು 24 (DaijiworldNews/PY): "ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷ ಹೇಳಿದ ಕೆಲಸವನ್ನು ಮಾಡುತ್ತೇನೆ" ಎಂದು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಸಿಎಂ ಸ್ಥಾನದ ರೇಸ್ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಕೇವಲ ಪಕ್ಷದ ಕಾರ್ಯಕರ್ತ. ಪಕ್ಷ ಹೇಳಿದ ಕಾರ್ಯವನ್ನು ಮಾಡುತ್ತೇನೆ. ನಾನು ಎಂದಿಗೂ ಸಿಎಂ ಹುದ್ದೆಯ ಕನಸು ಕಂಡಿಲ್ಲ" ಎಂದಿದ್ದಾರೆ.
"ಯಾವುದೇ ಸ್ಥಾನ ಹಾಗೂ ಹುದ್ದೆಗಿಂತ ಪಕ್ಷ ದೊಡ್ಡದು ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ನಾನು ಎಂದಿಗೂ ದೊಡ್ಡ ಸ್ಥಾನಕ್ಕಾಗಿ ಕನಸು ಕಂಡವನಲ್ಲ. ಆದರೆ, ಪಕ್ಷದ ಉನ್ನತ ನಾಯಕರು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ನಾನು ಪಕ್ಷದ ತತ್ವಗಳಿಗೆ ಬದ್ಧವಾಗಿರುವ ವ್ಯಕ್ತಿ" ಎಂದು ಹೇಳಿದ್ದಾರೆ.