ಬೆಂಗಳೂರು, ಜು 24 (DaijiworldNews/PY): ಧಾರ್ಮಿಕ ಕೇಂದ್ರ, ಅಮ್ಯೂಸ್ಮೆಂಟ್ ಪಾರ್ಕ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ಕೆಳಗೆ ಹಾಗೂ ಕಟ್ಟುನಿಟ್ಟಾದ ಅನುಷ್ಠಾನಕ್ಕಾಗಿ ಮುಂದಿನ ಆದೇಶದವರೆಗೆ ಮುಖ್ಯ ಆಯುಕ್ತ ಬಿಬಿಎಂಪಿ, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲೆಗಳ ಪೊಲೀಸ್ ಅಧೀಕ್ಷಕರು, ಇತರ ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.
"ಆರಾಧನಾ ಸ್ಥಳಗಳಿಗೆ ಸಂಬಂಧಿಸಿದ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ತೆರೆಯಲು ಕೂಡಾ ಅನುಮತಿ ನೀಡಲಾಗಿದೆ. ಜುಲೈ 25ರಿಂದ ಕೊರೊನಾಕ್ಕೆ ಸಂಬಂಧಿಸಿದಣತೆ ಸೂಕ್ತ ನಡವಳಿಕೆ ಹಾಗೂ ಸಂಬಂಧಪಟ್ಟ ಇಲಾಖೆ ಹೊರಡಿಸಿದ ಎಸ್ಒಪಿ ಅನ್ವಯ ಕಟ್ಟುನಿಟ್ಟಾಗು ಪೂಜೆಗೆ ಅನುಮತಿ ನೀಡಲಾಗಿದೆ. ಆದರೆ, ಜಾತ್ರೆ, ದೇವಾಲಯದ ಉತ್ಸವ ಸೇರಿದಂತೆ ಮೆರವಣಿಗೆಗಳು, ಸಭೆಗಳಿಗೆ ಅನುಮತಿ ನೀಡಿಲ್ಲ" ಎಂದು ತಿಳಿಸಿದೆ.
"ಅಮ್ಯೂಸ್ಮೆಂಟ್ ಪಾರ್ಕ್ಗಳು ಹಾಗೂ ಅದೇ ರೀತಿಯ ಸ್ಥಳಗಳನ್ನು ಕಟ್ಟುನಿಟ್ಟಾಗಿ ತೆರೆಯಲು ಅನುಮತಿ ನೀಡಲಾಗಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಜಲ ಕ್ರೀಡೆಗಳು, ಜಲ ಸಂಬಂಧಿತ ಸಾಹಸ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿಲ್ಲ" ಎಂದು ಹೇಳಿದೆ.