ಹುಬ್ಬಳ್ಳಿ, ಜು 23 (DaijiworldNews/PY): ಭೂಕುಸಿತದ ಪರಿಣಾಮ ಮುಂಬೈಗೆ ತೆರಳುವ ವಿಶೇಷ ರೈಲು (ಮಂಗಳೂರು-ಮುಂಬೈ ಎಕ್ಸ್ಪ್ರೆಸ್) ದೂದ್ ಸಾಗರ್- ಸೋನೌಲಿಮ್ ನಿಲ್ದಾಣಗಳ ನಡುವೆ ಹಳಿ ತಪ್ಪಿದ್ದು, ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮಡ್ಗಾಂವ್ಗೆ ವಾಪಾಸ್ಸು ಕಳುಹಿಸಲಾಗಿದೆ.
ಕರಾವಳಿ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಗೋವಾದಲ್ಲಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ಮಡ್ಗೊವನ್-ಲೋಂಡಾ-ಮಿರಾಜ್ ಮೂಲಕ ಅನೇಕ ರೈಲುಗಳು ಸಂಚರಿಸುತ್ತಿವೆ. ಹಾಗಾಗಿ ಮಂಗಳೂರು-ಮುಂಬೈ ರೈಲು ಕಾರವಾರ, ಮಡ್ಗಾಂವ್, ಲೋಂಡಾ ಹಾಗೂ ಮಿರಾಜ್ ಮೂಲಕ ಮುಂಬೈಗೆ ಸಂಚರಿಸುತ್ತಿತ್ತು.
ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದೂದ್ಸಾಗರ್ ಹಾಗೂ ಸೋನಾಲಿಮ್ ನಡುವೆ ಎರಡು ಭೂಕುಸಿತ ಸಂಭವಿಸಿದೆ. ಘಟನೆ ನಡೆದ ತಕ್ಷಣವೇ ಕ್ಯಾಸಲ್ ರಾಕ್ ಹಾಗೂ ವಾಸ್ಕೋ ಡಾ ಗಾಮಾದ ಅಪಘಾತ ಪರಿಹಾರ ರೈಲು ಸ್ಥಳಕ್ಕೆ ಧಾವಿದ್ದು, ಪುನಃಸ್ಥಾಪನೆ ಕ್ರಮ ಕೈಗೊಂಡಿದೆ.
ಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಸೇರಿದಂತೆ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳ ತಂಡವು ಕೂಡಾ ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಏತನ್ಮಧ್ಯೆ, ಹಜರತ್ ನಿಜಾಮುದ್ದೀನ್-ವಾಸ್ಕೋ ಡಿ ಗಾಮಾ ವಿಶೇಷ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಿ ಪುನಃ ಲೋಂಡಾಗೆ ಕಳುಹಿಸಲಾಯಿತು.
ರೈಲಿನಲ್ಲಿ ಒಟ್ಟು 887 ಪ್ರಯಾಣಿಕರಿದ್ದು, ಎಸ್ಡಬ್ಲ್ಯುಆರ್ ಬಸ್ಗಳನ್ನು ಬಳಸಿ ಪ್ರಯಾಣಿಕರನ್ನು ಕಳುಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ವಿಮಾನದಲ್ಲಿ 887 ಪ್ರಯಾಣಿಕರು ಇದ್ದರು. ಎಸ್ಡಬ್ಲ್ಯುಆರ್ ಬಸ್ಗಳನ್ನು ಬಳಸುವ ಪ್ರಯಾಣಿಕರ ಸಾಗಣೆಗೆ ವ್ಯವಸ್ಥೆ ಮಾಡುತ್ತಿದೆ.